Mangaluru, Mar. 15: Daivik Amrith Trust Mangalore headed by Rev. Fr. Andrew Dsouza has been functioning for the last 13 years with Daivik Amrith Publications, Daivik Amrith Konkani Monthly, Daivik Amrith Pilgrimages, Conducting tours to holy places and Daivik Amrith Media giving T.V Programmes regularly on Divine Word channel. Daivik Amrith Charitable Trust has been helping poor students for higher Education and giving charity to poor patients. This way undertake Social Service activities.

 

In an efforts to collect funds for the Daivik Amrith Poor students education fund we have arranged a program of musical ballet “Maa Tuje Pranaam” In Hindi on the life of Mother Theresa at the open grounds, Holy Cross Church, Cordel, Kulshekar, Mangalore on Sunday 17th of March at 6:30pm. This sound and light program will be enacted by Sangeeth Abhinay Academy, Mumbai.

Msgr. Maxim Noronha The Vicar General of Mangalore Diocese will be inaugurating the program and V.Rev.Fr. Victor Machado, Parish Priest of Cordel will be the chief guest. The book written by Mr. J.V. Dmello “Bhangara Khanas” will be released on the occasion. Around 4,000 people are expected to gather on the occasion.

We cordially invite all of you the media persons for this program and request you give due publicity.

Convenor, Daivik Amrith Editorial Board and Daivik Amrith Committee

Rev. Fr. Andrew Dsouza, Managing Trustee, Daivik Amrith Trust, Mr. Santhosh Alwyn Lobo, General Manager, Mr. Henbert Pinto, Programme Convenor and Mr. Stanly Dcunha, Member, Daivik Amrith Committee.

 

 


ಪತ್ರಿಕಾ ಪ್ರಕಟಣೆ

ಮಂಗಳೂರಿನಲ್ಲಿ ‘ಮಾ ತುಜೆ ಪ್ರಣಾಮ್...’

ವಂದನೀಯ ಧರ್ಮಗುರು ಆ್ಯಂಡ್ರೂ ಡಿಸೋಜಾ ಇವರ ಅಧ್ಯಕ್ಷತೆಯಲ್ಲಿ ‘ದೈವಿಕ್ ಅಮೃತ್ ಟ್ರಸ್ಟ್’, ಮಂಗಳೂರು ಕಳೆದ 13 ವರುಷಗಳಿಂದ ‘ದೈವಿಕ್ ಅಮೃತ್ ಪಬ್ಲಿಕೇಷನ್ಸ್’, ‘ದೈವಿಕ್ ಅಮೃತ್ ಕೊಂಕಣಿ ಧಾರ್ಮಿಕ ಮಾಸಿಕ ಪತ್ರಿಕೆ’ಯನ್ನು ನಡೆಸುತ್ತಿದೆ. ಅದಲ್ಲದೇ ‘ದೈವಿಕ್ ಅಮೃತ್ ಟೂರ್ಸ್’ (ಧಾರ್ಮಿಕ ಸ್ಥಳಗಳಿಗೆ ಪ್ರವಾಸಗಳು), ‘ದೈವಿಕ್ ಅಮೃತ್ ಮೀಡಿಯಾ’ದ ಮೂಲಕ ಧಾರ್ಮಿಕ ಟಿ.ವಿ ಕಾರ್ಯಕ್ರಮಗಳನ್ನು ಹೀಗೆ ಹಲವು ಕಾರ್ಯಕ್ರಮಗಳನ್ನು ನಡೆಸುತ್ತಾ ಇದೆ. ‘ದೈವಿಕ್ ಅಮೃತ್ ಚಾರಿಟೇಬಲ್ ಟ್ರಸ್ಟ್’ ಮೂಲಕ ಬಡವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವು, ಬಡ ರೋಗಿಗಳಿಗೆ ವೈದ್ಯಕೀಯ ನೆರವು ಮತ್ತು ಸಾಮಾಜಿಕ ಸೇವೆಯಲ್ಲಿ ಗಣನೀಯ ಕೊಡುಗೆ ನೀಡುತ್ತಾ ಬಂದಿದೆ.

ಬಡವಿದ್ಯಾರ್ಥಿಗಳ ಶಿಕ್ಷಣಕ್ಕೆ ಮತ್ತು ಸಾಮಾಜಿಕ ಸೇವೆಗಳಿಗೆ ಸಹಾಯರ್ಥವಾಗಿ ಇದೇ ಮಾರ್ಚ್ 17 ರಂದು ರವಿವಾರ ಸಂಜೆ 6:30 ಗಂಟೆಗೆ ಮಂಗಳೂರು, ಕುಲಶೇಖರ ಕೊರ್ಡೆಲ್ ಹೋಲಿ ಕ್ರಾಸ್ ದೇವಾಲಯದ ವಠಾರದಲ್ಲಿ ದೇಶ ಮತ್ತು ವಿದೇಶದಲ್ಲಿ ಪ್ರಖ್ಯಾತಿಯನ್ನು ಪಡೆದ ವಂ| ಡಾ| ಚಾಲ್ರ್ಸ್ ವಾಜ್ ಎಸ್.ವಿ.ಡಿ. ಇವರ ನಿರ್ದೇಶನದ ‘ಸಂಗೀತ ಅಭಿನಯ ಅಕಾಡೆಮಿ’ ಮುಂಬೈ ಇದರ ಕಲಾವಿದÀರಿಂದ ಸಾದರಪಡಿಸುವ ‘ಮಾ ತುಜೆ ಪ್ರಣಾಮ್’... ಮದರ್ ತೆರೆಜಾ ಇವರ ಜೀವನ ಚರಿತ್ರೆವುಳ್ಳ ಧ್ವನಿ ಮತ್ತು ಬೆಳಕಿನ ಪ್ರಯೋಗದ ಸಂಗೀತ, ಗೀತೆ, ಅಭಿನಯ, ನೃತ್ಯವುಳ್ಳ ವಿಭಿನ್ನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಮಂಗಳೂರು ಧರ್ಮಪ್ರಾಂತದ ವಿಕಾರ್ ಜನರಲ್ ಅತೀ ವಂದನೀಯ ಧರ್ಮಗುರು ಮ್ಯಾಕ್ಸಿಮ್ ನೊರೊನ್ಹಾ ಇವರು ಈ ಕಾರ್ಯಕ್ರಮವನ್ನು ಉದ್ಘಾಟಿಸಲಿರುವರು. ಕುಲಶೇಖರ ವಲಯ ಧರ್ಮಗುರುಗಳಾದ ಅತೀ ವಂ| ವಿಕ್ಟರ್ ಮಚಾದೊ ಇವರು ಮುಖ್ಯ ಅತಿಥಿಯಾಗಿರುವರು. ಈ ಸಂದರ್ಭದಲ್ಲಿ ಶ್ರೀ ಜೆ.ವಿ.ಡಿಮೆಲ್ಲೊ ಇವರು ಬರೆದ ‘ಭಾಂಗಾರಾಚೆಂ ಕಣಸ್’ ಧಾರ್ಮಿಕ ಲೇಖನಗಳ ಪುಸ್ತಕವನ್ನು ಬಿಡುಗಡೆ ಮಾಡಲಾಗುವುದು. ಸುಮಾರು 4,000 ಜನರು ಸೇರುವ ನಿರೀಕ್ಷೆಯಿದೆ. ಈ ಕಾರ್ಯಕ್ರಮಕ್ಕೆ ತಾವು ತಮ್ಮ ಕುಟುಂಬ ಸಹಿತರಾಗಿ ಆಗಮಿಸಿ, ಈ ಕಾರ್ಯಕ್ರಮದ ಬಗ್ಗೆ ಪ್ರಚಾರವನ್ನು ಕೊಡಬೇಕಾಗಿ ತಮ್ಮಲ್ಲಿ ವಿನಂತಿಸುತ್ತೇವೆ.

ಈ ಕಾರ್ಯಕ್ರಮಕ್ಕೆ ತಮಗೆಲ್ಲರಿಗೂ ಸುಸ್ವಾಗತ ಬಯಸುವ

ಸಂಚಾಲಕರು, ದೈವಿಕ್ ಅಮೃತ್ ಸಂಪಾದಕೀಯ ಮಂಡಳಿ ಮತ್ತು ದೈವಿಕ್ ಅಮೃತ್ ಸಮಿತಿ

ಪತ್ರಿಕಾಗೋಷ್ಟಿಯಲ್ಲಿ ಭಾಗವಹಿಸುವವರು:

· ಫಾ| ಆ್ಯಂಡ್ರೂ ಡಿಸೋಜಾ, ಸಂಚಾಲಕರು ಮತ್ತು ಆಡಳಿತ ಟ್ರಸ್ಟಿ – ‘ದೈವಿಕ್ ಅಮೃತ್ ಟ್ರಸ್ಟ್’

· ಶ್ರೀ ಸಂತೋಷ್ ಆಲ್ವಿನ್ ಲೋಬೊ, ಮುಖ್ಯ ವ್ಯವಸ್ಥಾಪಕರು

· ಶ್ರೀ ಹೆನ್ಬರ್ಟ್ ಪಿಂಟೊ, ಕಾರ್ಯಕ್ರಮ ಸಮಿತಿ ಸಂಚಾಲಕರು.

· ಶ್ರೀ ಸ್ಟ್ಯಾನ್ಲಿ ಡಿಕುನ್ಹಾ, ‘ದೈವಿಕ್ ಅಮೃತ್ ಸಮಿತಿ’ ಸದಸ್ಯರು.

Home | About | NewsSitemap| Contact

Copyright ©2017 www.daivikamrith.in. Powered by eCreators

Contact Us

DAIVIK AMRITH
# 504, 3rd Floor, Kunil Complex,
Bendoorwell, Kankanady, Mangaluru - 575 002.
Karnataka, India.
Ph. : 0824 - 4273161
Mob. : 8105585307, 7022139405
Email : [email protected]