Media Release
Photos : Stanly Bantwal
ಬಡವಿದ್ಯಾರ್ಥಿಗಳ ಶಿಕ್ಷಣಕ್ಕೆ ಮತ್ತು ಸಾಮಾಜಿಕ ಸೇವೆಗಳಿಗೆ ಸಹಾಯರ್ಥವಾಗಿ ಇದೇ 2019 ಮಾರ್ಚ್ 17 ರಂದು ರವಿವಾರ ಸಂಜೆ 6:30 ಗಂಟೆಗೆ ಮಂಗಳೂರು, ಕುಲಶೇಖರ ಕೊರ್ಡೆಲ್ ಹೋಲಿ ಕ್ರಾಸ್ ದೇವಾಲಯದ ವಠಾರದಲ್ಲಿ ದೇಶ ಮತ್ತು ವಿದೇಶದಲ್ಲಿ ಪ್ರಖ್ಯಾತಿಯನ್ನು ಪಡೆದ ವಂ| ಡಾ| ಚಾಲ್ರ್ಸ್ ವಾಜ್ ಎಸ್.ವಿ.ಡಿ. ಇವರ ನಿರ್ದೇಶನದ ‘ಸಂಗೀತ ಅಭಿನಯ ಅಕಾಡೆಮಿ’ ಮುಂಬೈ ಇದರ ಕಲಾವಿದÀರಿಂದ ಸಾದರಪಡಿಸುವ ‘ಮಾ ತುಜೆ ಪ್ರಣಾಮ್’... ಮದರ್ ತೆರೆಜಾ ಇವರ ಜೀವನ ಚರಿತ್ರೆವುಳ್ಳ ಧ್ವನಿ ಮತ್ತು ಬೆಳಕಿನ ಪ್ರಯೋಗದ ಸಂಗೀತ, ಗೀತೆ, ಅಭಿನಯ, ನೃತ್ಯವುಳ್ಳ ವಿಭಿನ್ನ ಕಾರ್ಯಕ್ರಮವನ್ನು ಆಯೋಜಿಸಲಾಉಯಿತು.
ಕಾರ್ಯಕ್ರಮದ ಮೊದಲಿಗೆ ವಂ| ವಲೆರಿಯನ್ ಡಿಸಿಲ್ವ ಪ್ರಾರ್ಥನೆ ನೆರೆವರಿಸಿದರು.
ಮಂಗಳೂರು ಧರ್ಮಪ್ರಾಂತದ ವಿಕಾರ್ ಜನರಲ್ ಅತೀ ವಂದನೀಯ ಧರ್ಮಗುರು ಮ್ಯಾಕ್ಸಿಮ್ ನೊರೊನ್ಹಾ ಇವರು ಈ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕುಲಶೇಖರ ವಲಯ ಧರ್ಮಗುರುಗಳಾದ ಅತೀ ವಂ| ವಿಕ್ಟರ್ ಮಚಾದೊ ಇವರು ಮುಖ್ಯ ಅತಿಥಿಯಾಗಿದ್ದರು. ಈ ಸಂದರ್ಭದಲ್ಲಿ ಶ್ರೀ ಜೆ.ವಿ.ಡಿಮೆಲ್ಲೊ ಇವರು ಬರೆದ ‘ಭಾಂಗಾರಾಚೆಂ ಕಣಸ್’ ಧಾರ್ಮಿಕ ಲೇಖನಗಳ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. ಸುಮಾರು 3,000 ಜನರು ಈ ಕಾರ್ಯಕ್ರಮವನ್ನು ಕುಟುಂಬ ಸಹಿತರಾಗಿ ಆಗಮಿಸಿ, ಕಾರ್ಯಕ್ರಮ ವೀಕ್ಶಿಸಿದರು. ವಂ| ಫಾ| ಆ್ಯಂಡ್ರೂ ಡಿಸೋಜಾ, ಸಂಚಾಲಕರು ಮತ್ತು ಆಡಳಿತ ಟ್ರಸ್ಟಿ – ‘ದೈವಿಕ್ ಅಮೃತ್ ಟ್ರಸ್ಟ್’ ಇವರು ಸರ್ವರನ್ನು ಸ್ವಾಗತಸಿದರು, ಶ್ರೀ ಸಂತೋಷ್ ಆಲ್ವಿನ್ ಲೋಬೊ, ಮುಖ್ಯ ವ್ಯವಸ್ಥಾಪಕರು ಧನ್ಯವಾದಗೈದರು. ಶ್ರೀ ವಿಲ್ಫೆಡ್ ಅಲ್ವಾರಿಸ್ ಕಾರ್ಯಕ್ರಮ ನಿರುಪಿಸಿದರು.